mediadetailsimage

ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸುವ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡಿಗರು ಮತ್ತು ಸಾಹಿತ್ಯಾಸಕ್ತರ ಹಬ್ಬವೆಂದರೆ ತಪ್ಪಲ್ಲ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಮೀಸಲಾಗಿರುವ ಅತ್ಯಂತ ದೊಡ್ಡ ಕಾರ್ಯಕ್ರಮ ಇದು. ಕನ್ನಡಿಗರ ಐಕ್ಯತೆಯ ಚಿಹ್ನೆಯಾಗಿ ಈ ಸಮ್ಮೇಳನವು ನಡೆದು, ಸಾಹಿತ್ಯಾಸಕ್ತರು, ಕವಿ-ಲೇಖಕರು, ಕಲಾವಿದರು ಮತ್ತು ಸಂಸ್ಕೃತಿ ಪ್ರಿಯರು ಸೇರಿ ವಿಜೃಂಭಿಸುವ ಸಮಾವೇಶವಾಗಿದೆ.

1915 ರಿಂದ ಕನ್ನಡ ಸಾಹಿತ್ಯ ಪರಿಷತ್ ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತಿದೆ. ಕನ್ನಡದ ಇತಿಹಾಸವನ್ನು ಪ್ರಚಾರ ಮಾಡುವ ಮತ್ತು ಭಾಷೆಯನ್ನು ಅಭಿವೃದ್ಧಿಪಡಿಸುವ ಮುಖ್ಯ ಉದ್ದೇಶಗಳನ್ನು ಈ ಸಮ್ಮೇಳನ ಹೊಂದಿದೆ. ಕನ್ನಡಕ್ಕಾಗಿ ಹಗಲಿರುಳು ಶ್ರಮಿಸಿದ ಮತ್ತು ಭಾಷೆಗೆ ಅಮೂಲ್ಯ ಕೊಡುಗೆಯನ್ನು ನೀಡಿದ ಲೇಖಕರು ಮತ್ತು ಕವಿಗಳಿಗೆ ಸಮ್ಮೇಳನದ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ.