ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡಿಗರು ಮತ್ತು ಸಾಹಿತ್ಯಾಸಕ್ತರಿಗಾಗಿ ನಿಜಕ್ಕೂ ಹಬ್ಬವೇ ಸರಿ. ಕನ್ನಡ ಭಾಷೆಯ ಅಭಿವೃದ್ಧಿಗೆ ಮೀಸಲಾದ ಅತ್ಯಂತ ದೊಡ್ಡ ಕಾರ್ಯಕ್ರಮ ಇದು...
ಮಂಡ್ಯ: 1974 ಮತ್ತು 1994 ರಲ್ಲಿ ಎರಡು ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಆತಿಥ್ಯವಿತ್ತ ಮಂಡ್ಯ ನಗರಕ್ಕೆ, ಈ ಶತಮಾನದ ಮೊದಲ ಬಾರಿಗೆ ಸಮ್ಮೇಳನವನ್ನು ಆಯೋಜಿಸುವ ಅವಕಾಶ ಲಭಿಸಿದೆ. 21ನೇ ಶತಮಾನದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್‌ನಲ್ಲಿ ಆಯೋಜಿಸಲಾಗುತ್ತಿದೆ.